Friday, January 28, 2011

BLACK EAGLE'S DAY OUT ON JAN 16 2011

5th Bangalore Bird Race was scheduled on 16 Jan. Probably the largest in terms of team members 7 in total, and diverse in its composition, the Black Eagles set from IISc campus in the wee hours. Ably lead by Dr Gururaja KV and supported with occasional  glares and looks by the wise captain ((c) guru) Priti Gururaja. Bringing human touch with identifiying and pointing with avanyaru nodi, ivan ivanallava... was Dr Harish Bhat with constant ribbing on sarathi of the trip. I wonder where Dr HS Sudhira stores that inexhaustible source of energy in his 5o kg fragile frame? Its definitely not easy manoevering the bangalore traffic. He knows best being the man who gaveus urban sprawl! But his driving skill, we will explore in instalments. His passion for bird watching, was evident in the way he was excitedly pointing out the (at least to me difficult to spot even with binocs) lone rangers in distances. Dr Raghu Hedge, had come with his full trek kit, awe inspiring camera in tote, water bottle hitched to the everpresent backpack. How can I not mention my pick up and drop, cousin Dr NA Aravind, who with his keen ears and sight could come to identifying conclusion in a jiffy.(the one he dilly dallied did cost the eagle's their 15 seconds on the ramp PS also as Harish rightly said, who wanted a three way tie to the bird of the day???? sharing 2/3 of nice calenders!!)
       As the team assembled at the CES parking lot, as is the tradition, (BTW, I am going to bird watching after a gap of a few decades??) and started off in royal style to wards the silver jubilee pond. If you are looking for all the birds we spotted on the way, I will link it later. The sight of almost empty and barren pond bought tears to the eyes of team members whose fond memories were ignited in a unique way. the highpoint of this leg was the spotting of only the second sight till date of orange breasted green pigeon (link). the oohs and aahs of the team members were heard by the obgp but still he managed  to strike a stoic pose knowing fully well the fans and load of appreciation ahead. 
        The end of this leg culminated in the Nesara with steaming idli vadas bathing in sambar and hot coffee. Team left for the Hebbal lake, which unfortunately resembled the hampi ruins. The numbers and variety of winter visitors were meagre and not worth the stopover. But an interesting point here was a keen kid in his pre-teens, evincing interest to join the eagles on their expedition. He was sporting a pretty high tech camera, aiming and shooting any thing coming in the way. The kid was given some key pointers on birding and id by our Sudhira in his inimical style. 
       Surprisingly, traffic on the bellary road didnot test Sudhirs prowess. At puttenahalli lake (I don't know why it is still called so, because I could neither spot lake or water) which is covered mostly by hyacinth(?) few waterbirds were noticed and after a brief chat with the guards on duty, we left. A surprising feature by the side of the entrance is the CNR bar and resturant (renovated) evoking strong memories of the former director of IISc.

Thursday, January 27, 2011

ನಿದ್ರಾ ಭಂಗ


ಮೊನ್ನೆ ಇದ್ದಕ್ಕಿದ್ದ ಹಾಗೆ ನಡು ನಿದ್ದೆಯಿಂದ ಎಚ್ಚರ ಆಯಿತು. ವಿಶೇಷ ಏನು ಅಂತ ಕೇಳ್ತೀರ? ಬಲ ಕಿವಿಯಲ್ಲಿ ಒಂದು ಸೊಳ್ಳೆ ಹೊಕ್ಕಿತ್ತು. ಪಾಪ ಅಂಕು ಡೊಂಕು ಒಣ ಬಾವಿಯಲ್ಲಿ ಸಿಕ್ಕಿ ಬಿದ್ದು ಹಿಂದು ಬರಲಾಗದೆ ಮುಂದೆ ಹೋಗಲಾಗದೆ ಫಜೀತಿ ಪಡುತ್ತಿತ್ತು. ನನಗೋ ನಿದ್ದೆ ಹೋಗಿದ್ದೊಂದು ಕಡೆ, ಈಗ ಸೊಳ್ಳೆ ಏನಾದ್ರು ಕಿವಿ ಒಲವೆ ಕಚ್ಚಿ ಬಿಟ್ರೆ ಏನ್ ಮಾಡೋದು ಅನ್ನೋ ಯೋಚನೆ ಇನ್ನೊಂದ್ಕಡೆ. ಸರಿ, ಒಳ ಕಿವಿಯ ತಮ್ಮಟೆ ಹತ್ರ ಹೋಗ್ತಾ ಇದ್ದ ಹಾಗೆ, ನಗಾರಿ ಬಾರಿಸಿದ ಸದ್ದು, ಕರ ಕರ ಪರ ಪರ ಅಂತ ರಾತ್ರಿಯ ನೀರವ, ನನ್ನ ಯೋಚನೆ ಎರಡನ್ನೂ ಕದಿಯುವ ಸೊಳ್ಳೆ. ಮಗ್ಗುಲು ಬದಲಿಸಿದರೆ ಹೊರ ಹೋಗಬಹುದು ಅನ್ನೋ ಯೋಚನೆ ಬಂದಿದ್ದೆ, ಮಗ್ಗುಲು ಬದಲಿಸಿದೆ. ಊಹೂನ್ ಸೊಳ್ಳೆ ಜಪ್ಪಯ್ಯ ಅನ್ನಲಿಲ್ಲ. ಮತ್ತೆ ಕರ ಪರ, ಯಾವ ಎಮೆರ್ಜೆನ್ಸಿ ಹಿಂಸೆಗೂ ಕಮ್ಮಿ ಇಲ್ಲದ ಕರ್ಣ ವೇದನ. ಅಯ್ಯೋ ದೇವರೇ ಈ ನಡು ರಾತ್ರಿಯಲ್ಲಿ ಯಾವ ಕಿವಿ ಡಾಕ್ಟರ ಹುಡುಕಲಿಕ್ಕೆ ಹೋಗಲಿ ಅಂಬೋ ಸಂಕಟ ಬೇರೆ. ಅಮ್ಮವರನ್ನು ಏಳಿಸೋಕ್ಕೆ ಭಯ (ಆಮೇಲೆ ಸುರುವಾಗೋ ಹಿಂಸೆಗಿಂತ ಕಿವಿ ನೋವ ವಾಸಿ) ಬೇರೆ. ಇದರ ಮಧ್ಯೆ  ಕಿವಿಗೆ ಹೊಕ್ಕೊಂಡ ಅರಳೆ ಯಾಕಪ್ಪ ಮಲಗೋ ಮೊದಲು ತಗಿ ಬೇಕಿತ್ತು ಅಂತ ನನ್ನನ್ನೇ ಜರೆಯುತ್ತಾ ಅತ್ತಿತ್ತ ಮಗ್ಗುಲ ಬದಲಿಸೋ ಕೆಲಸ ಸುರು ಮಾಡಿದೆ. ಇಸ್ತರೊಳಗೆ ಪಾಪ ಸೊಳ್ಳೆ, ಯಾವ ಕಾಲದಿಂದ ಕಲೆ ಹಾಕಿದ್ದ ಗುಗ್ಗೆ ರಾಶಿ ಒಳಗೆ ಸಿಲುಕಿ ಸುಮ್ಮನಾಯ್ತು. ಅಯ್ಯಬ್ಬ ಬದಿಕಿದೆ ದೇವರೇ ಅಂತ ಮಲಗೋ ಮೊದ್ಲು ನೆನಪಾಗಿದ್ದು ಅಪ್ಪ ನನ್ನ ಬಾಲ್ಯದಲ್ಲಿ ಕಾಲ ಮೇಲೆ ಮಲಗಿಸಿಕೊಂಡು ಪ್ರತಿ ವಾರ ಕಿವಿ ಸ್ವಚ್ಚ ಮಾಡ್ತಿದ್ದ ಸೀನು. ಭಾನುವಾರ ಮಧ್ಯಾನ ಸ್ನಾನದ ನಂತರದ ಕಾರ್ಯ ಅದೇ. ಒಂದು ಸಣ್ಣ ಸೈಕಲ್ ಸ್ಪೋಕೆ ತುದಿಗೆ ಅರಳೆ ಸುತ್ತಿ, ಹಗೂರಕ್ಕೆ ಕಿವಿಯಾಗೆ ಸುತ್ತಿಸುತ್ತಿದ್ದರೆ, ಸಣ್ಣಕ್ಕೆ ಅಮಲು ಏರ್ಕೊತಿತ್ತು. ನಿಜ ಹೇಳ್ಬೇಕು ಅಂದ್ರೆ ಅದ್ನ ಅನುಭವಿಸ್ಬೋದಷ್ಟೇ. ಬರ್ಯೋಕೆ ಖಂಡಿತ ಆಗಲ್ಲ. ಈ ಕಾರ್ಯ ಇನ್ನೊಂದು ಕಿವಿಗೂ ಮುಗಿತು ಅಂದ್ರೆ ನಾವ್ ರೆಡಿ. ಸಣ್ಣದಾಗಿ ಹೇಳ್ಬೇಕಂದ್ರೆ ಪ್ರತಿ ವಾರ ನಾನು ಕಾಯ್ತಿದ್ದ ವಿಶೇಷ ಕಾರ್ಯ ಇದು. ಅಪ್ಪ ಏನಾದ್ರೂ ಕಿವಿ ಕ್ಲೀನ್ ಮಾಡಿ ಇಟ್ಟಿದ್ರೆ, ಸೊಳ್ಳೆ ನನ್ನ ಕಿವಿ ಧಂ ಅನ್ನಿಸ್ಬಿತ್ತಿರೋದೇನೋ?